ಶ್ರೀದೇವಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಎಲ್ಲೆಡೆ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದು ಸಹಸ್ರಾರು ಭಕ್ತಾದಿಗಳು ಭಾನುವಾರ ಬಿಡುವು ಮಾಡಿಕೊಂಡು ಉತ್ಸಾಹದಿಂದ ತಂಡೋಪತಂಡವಾಗಿ ಭಾಗವಹಿಸಿ ಹಲವಾರು ದಿನಗಳ ಶ್ರಮವನ್ನು ಉತ್ತಮವಾಗಿ ವ್ಯಯಿಸುತ್ತಿದ್ದಾರೆ. ಹಾಗೂ ಈ ಮೂಲಕ ದೇವಳಕ್ಕೆ ಸಹಾಯವಾಗುತ್ತಿದ್ದಾರೆ. ತಾವೂ ಕೂಡಾ ತಮ್ಮ ಬಳಗವನ್ನು ಈ ಸೇವಾ ಕೈಂಕರ್ಯದಲ್ಲಿ ಸೇರಿಸಿ ಅಳಿಲುಸೇವೆಯ ಮೂಲಕ ಶ್ರೀದೇವಿಯ ಕೃಪೆಗೆ ಪಾತ್ರರಾಗಬಹುದು. ಕರಸೇವೆ ಮಾಡಲಿಚ್ಛಿಸುವ ಭಕ್ತಾದಿಗಳು ಕಛೇರಿಗೆ ಮುಂಚಿತವಾಗಿ ತಿಳಿಸಿ ಬರಬಹುದು. ದಿನಾಂಕ 29.12.2019ರಂದು ಕರಸೇವೆಯಲ್ಲಿ ತೊಡಗಿರುವವರ ಉತ್ಸಾಹದ ಒಂದು ನೋಟ.