Welcome to Kateel Temple

ಭಕ್ತಮಹಾಶಯರೇ,    

                     ಸ್ವಸ್ತಿಶ್ರೀವಿಕಾರಿನಾಮಸಂವತ್ಸರದ ಮಕರ ಮಾಸದಿನ 16 ಸಲುವಮಾಘಶುಕ್ಲ 5 ಯು ತಾ. 30-1-2020 ನೇ ಗುರುವಾರ, ಪ್ರಾತಃ 09-37 ಕ್ಕೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ, ಶಿಬರೂರು ಶ್ರೀಕೃಷ್ಣರಾಜ ತಂತ್ರಿಗಳ ಸಹಯೋಗದೊಂದಿಗೆ,  ಕಟೀಲೇಶ್ವರಿ ಶ್ರೀದುರ್ಗಾಪರಮೇಶ್ವರಿಗೆ ಬ್ರಹ್ಮಕಲಶಾಭಿಷೇಕೋತ್ಸವವು ನೆರವೇರಲಿರುವುದು. ಹಾಗೂ ದಿನಾಂಕ 1-2-2020 ರಂದು ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ನಾಗಮಂಡಲಸೇವೆ ನಡೆಯಲಿರುವುದು. ಹಾಗೂ ದಿನಾಂಕ 3-2-2020 ರಂದು ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವದಲ್ಲಿ ಸಹಸ್ರಚಂಡಿಕಾಯಾಗವು ನಡೆಯಲಿರುವುದು.

                      ಆ ಪ್ರಯುಕ್ತ ತಾ. 22-1-2020 ರಿಂದ 3-2-2020 ರವರೆಗೆ ಜರಗುವ ಧಾರ್ಮಿಕ ಕಾರ್ಯಕ್ರಮಗಳಿಗೆ ತಾವು, ಇಷ್ಟಮಿತ್ರರು ಹಾಗೂ ಭಕ್ತಬಾಂಧವರೊಂದಿಗೆ ಚಿತ್ತೈಸಿ, ಈ ಮಂಗಳಕಾರ್ಯದಲ್ಲಿ ತ್ರಿಕರಣಪೂರ್ವಕ ಭಾಗವಹಿಸಿ, ಶ್ರೀಮುಡಿಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀದೇವಿ ಭ್ರಮರಾಂಬೆಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.


All Items

PROGRAMMES

ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀದೇವಳದಲ್ಲಿ ದಿನಂಪ್ರತಿ ಬೆಳಗ್ಗೆ 09.00ರಿಂದ ಸಂಜೆ 06.00ರವರೆಗೆ ಭಜನಾ ಕಾರ್ಯಕ್ರಮ ನಡೆಯುತ್ತಿದೆ.

E-Sevas See all

BRAHMAKALASHOTSAVA NIDHI
100.00

ಅನ್ನದಾನ ಸೇವೆ

1 ದಿನದ ಅನ್ನದಾನ ಸೇವೆ

ಬ್ರಹ್ಮಕಲಶೋತ್ಸವದ 1 ದಿನದ ಅನ್ನದಾನ ಸೇವೆ